Index   ವಚನ - 218    Search  
 
ಇಷ್ಟಲಿಂಗದಲ್ಲಿ ಸರ್ವಾಚಾರಸಹಿತ ಮನಸೋಂಕಿ ಆಚರಿಸುವಲ್ಲಿ ಅಭ್ಯಾಸಿಯ ಅಭ್ಯಾಸಕ್ರೀಯೆ ಬಲಿದು, ಇಷ್ಟಲಿಂಗದಲ್ಲಿ ಸರ್ವಾಚಾರಸಹಿತ ಮನ ನೆಮ್ಮಿ ಆಚರಿಸುವಲ್ಲಿ ಮಾರ್ಗಕ್ರೀ ಬಲಿದು, ಇಷ್ಟಲಿಂಗದಲ್ಲಿ ಸರ್ವಾಚಾರಸಹಿತ ಮನವರಿದು ಆಚರಿಸುವಲ್ಲಿ ಮೀರಿದಕ್ರೀ ಬಲಿದು, ಆ ಇಷ್ಟಲಿಂಗದಲ್ಲಿ ಸರ್ವಾಚಾರ ಸಹಿತ ಮನವಾಚರಿಸುವಲ್ಲಿ ಮೀರಿದ ಕ್ರಿಯಾನಿಷ್ಪತ್ತಿ. ಇಂತೀ ತ್ರಿವಿಧಸ್ಥಲವನೊಳಕೊಂಡ ಮಾರ್ಗಕ್ರೀ ಲಿಂಗದಲ್ಲಿ, ಕೂಡಲಚೆನ್ನಸಂಗನಲ್ಲಿ ಈ ಕಾರ್ಯಕ್ಕೆ ಪ್ರಸಾದವಾಯಿತ್ತು.