ಅಂಗದ ಮೇಲೆ ಲಿಂಗಸನ್ನಹಿತವಾದ ಬಳಿಕ
ಶ್ರೋತ್ರದಲ್ಲಿ ಅನ್ಯಶಬ್ದವ ಕೇಳನಾ ಶರಣನು.
ಅಂಗದ ಮೇಲೆ ಲಿಂಗಸನ್ನಿಹಿತವಾದ ಬಳಿಕ
ಅನ್ಯವ ಮುಟ್ಟನಾ ಶರಣನು.
ಅಂಗದ ಮೇಲೆ ಲಿಂಗಸಾಹಿತ್ಯವಾದ ಬಳಿಕ
ಅನ್ಯವ ನೋಡನಾ ಶರಣನು.
ಅಂಗದ ಮೇಲೆ ಲಿಂಗಸನ್ನಿಹಿತವಾದ ಬಳಿಕ
ಅನ್ಯ ಆಹಾರ ವ್ಯವಹಾರವನರಿಯನಾ ಶರಣನು
ಅಂಗದ ಮೇಲೆ ಲಿಂಗಸನ್ನಿಹಿತವಾದ ಬಳಿಕ
ಅನ್ಯವ ಘ್ರಾಣಿಸನಾ ಶರಣನು.
ಅಂಗದ ಮೇಲೆ ಲಿಂಗಸನ್ನಿಹಿತವಾದ ಬಳಿಕ
ಕೂಡಲಚೆನ್ನಸಂಗಯ್ಯನಲ್ಲದನ್ಯವನರಿಯನಾ ಶರಣನು.