Index   ವಚನ - 266    Search  
 
ಲಿಂಗಪ್ರಸಾದವನುಂಬರೆ ಎಂಜಲೆಂಬರು, ಲಿಂಗವನೆಂತೊಲಿಸುವರು? ತನುಭಾವವೆಂಜಲಾದರೇನು, ಪ್ರಸಾದವನೆಂಜಲೆಂತೆನಬಹುದು? ಜನ್ಮವುಂಟೆಂಬರು ಪಾವನವಿಡಿದು, ಮುನ್ನೊಂದು ಮೃಗದ ಮುಖದಲ್ಲಿ! ಅನ್ಯರಿಗುಂಟೆ ಶಿವಪಥವು? ಮನ್ನಿಸಲೇಕೆ ಒಲ್ಲೆನಯ್ಯಾ. "ಶ್ವಪಚ್ಯೋsಪಿ ಶಿವಭಕ್ತಾನಾಂ ಲಿಂಗಾರ್ಚನಪರಃ ಪದಂ ಅನ್ಯದೇವಂ ತು ಜಿಹ್ವಾಗ್ರೇ ಪರಜನ್ಮವಿಮೋಕ್ಷಣಂ ಪರಬ್ರಹ್ಮ ವೇದಶಾಸ್ತ್ರೇಭ್ಯೋ ಶಿವಶಾಸ್ತ್ರಂತು ಶಾಂಕರಿ" ಎಂದುದಾಗಿ, ಕರ್ಮಾದಿಗುಣಂಗಳಂ ಕಳೆವ ಸಾಮರ್ಥ್ಯವೆನ್ನ ಲಿಂಗಕ್ಕಲ್ಲದೆ ಬೇರುಂಟೆ? ಇಂತೆಂದುದು ದೃಷ್ಟ. ಕೂಡಲಚೆನ್ನಸಂಗನ ಶರಣರಿಗಲ್ಲದಿಲ್ಲ.