Index   ವಚನ - 272    Search  
 
ಗುಪ್ತದಲ್ಲಿ ಕೊಂಬುದು ಗೋಮಾಂಸವಯ್ಯಾ, ಪ್ರಕಟದಲ್ಲಿ ಕೊಂಬುದು ಅಪ್ರಸಾದವಯ್ಯಾ, ಗುಪ್ತವನೂ ಪ್ರಕಟವನೂ ಕಳೆದು ಕೊಟ್ಟುಕೊಳಬಲ್ಲರೆ ನೆಟ್ಟನೆ ಪ್ರಸಾದಿ ಕೂಡಲಚೆನ್ನಸಂಗಮದೇವಾ.