Index   ವಚನ - 273    Search  
 
ಪ್ರಕಟದಿಂದ ಕೊಂಬುದು ಪ್ರಸಾದವಲ್ಲ, ಗುಪ್ತದಿಂದ ಕೊಂಬುದು ಪ್ರಸಾದವಲ್ಲ, ಪ್ರಕಟದಂತುಟೆ ಪ್ರಸಾದ? ಗುಪ್ತದಂತುಟೆ ಪ್ರಸಾದ? ಪ್ರಸಾದದಂತುವನೇನೆಂದು ಹೇಳುವೆನಯ್ಯಾ? ಭವಭಾರಿ ಜೀವಿಗಳೊಡನೆ ಪ್ರಸಾದದಂತುವನೇನಂದುಪಮಿಸುವೆನು? "ನಾರೂಢಸ್ಯ ಪ್ರಸಾದೋ ಹಿ ನ ಗುಪ್ತಸ್ಯ ಪ್ರಸಾದಕಮ್| ಗೋಪ್ಯಾರೂಢೋsಭಯಂ ನಾಸ್ತಿ ಮಹಾಪ್ರಸಾದಸಂಗಿನಃ"|| ಎಂದುದಾಗಿ, ಪ್ರಕಟ ಗುಪ್ತವ ಕಳೆದು ನೆಟ್ಟನೆ ಪ್ರಸಾದವ ಕೊಳಬಲ್ಲ ಕೂಡಲಚೆನ್ನಸಂಗಾ ನಿಮ್ಮ ಪ್ರಸಾದಿ.