Index   ವಚನ - 274    Search  
 
ಅರ್ಪಿತ ಅನರ್ಪಿತವೆಂಬರು, ಅರ್ಪಿತವ ಮಾಡುವ ಪರಿಯೆಂತಯ್ಯಾ? ತನು ಮುಟ್ಟಿ ಕೊಟ್ಟುದು ಲಿಂಗಾರ್ಪಿತವಲ್ಲ, ಮನ ಮುಟ್ಟಿ ಕೊಟ್ಟುದು ಲಿಂಗಾರ್ಪಿತವಲ್ಲ, ಅರ್ಪಿತದ ಕ್ರಮವ ಕೂಡಲಚೆನ್ನಸಂಗಾ ನಿಮ್ಮ ಶರಣ ಬಲ್ಲ.