Index   ವಚನ - 276    Search  
 
ಭಾವದ ಕೊನೆಯ ಮೊನೆಯಲ್ಲಿ ದೃಷ್ಟಿಯ ಸಂಧಿಸಿ, ಪದಾರ್ಥದ ಪೂರ್ವಾಶ್ರಯವ ಕಳೆದನು ಶರಣನು, ಮನಮುಟ್ಟಲೀಯದೆ. ಸ್ವಾಮಿ ಭೃತ್ಯಸಂಬಂಧಕ್ಕೆ ಗುಣವಲ್ಲೆಂದ ಶರಣನು, ಮನಮುಟ್ಟಲೀಯದೆ, ಭಕ್ತನ ಕೈಮುಟ್ಟಿ ಪಾವನವೆಂಬ ಸಂದಣಿಯಲ್ಲಿ ಹುಗದು, ಮನಮುಟ್ಟಲೀಯದೆ. ಇದು ಕಾರಣ ಕೂಡಲಚೆನ್ನಸಂಗನ ಬಸವಣ್ಣನ ಪ್ರಸಾದದಲ್ಲಿ ಸುಖಿಯಾದೆ.