Index   ವಚನ - 275    Search  
 
ಸಾರಾಯ ಪದಾರ್ಥವನಾರಯ್ಯಬೇಕೆಂದು ಶರಣ ಮರ್ತ್ಯಕ್ಕೆ ಬಂದು, ತನ್ನ ಇಪ್ಪತ್ತೈದಿಂದ್ರಿಯಂಗಳ ಭಕ್ತರ ಮಾಡಿ, ಮೆಲ್ಲಮೆಲ್ಲನೆ ಅವರ ಪೂರ್ವಾಶ್ರಯವ ಕಳೆದು ಕಲ್ಪಿತವಿಲ್ಲದೆ ಅರ್ಪಿತವ ಮಾಡಲು, ಇಂದ್ರಿಯಂಗಳು ತಮ್ಮ ತಮ್ಮ ಮುಖದಲ್ಲಿ ಗ್ರಹಿಸಲಮ್ಮದೆ ಕೂಡಲಚೆನ್ನಸಂಗಂಗೆ ಬೇಕೆಂದು ಹಿಡಿದು ಕೊಂಡೈದವೆ.