Index   ವಚನ - 278    Search  
 
ಲಿಂಗಕ್ಕೆಂದು ಮಾಡುವೆನು, ಲಿಂಗಕ್ಕೆಂದು ನೀಡುವೆನು ನೋಡಯ್ಯಾ. ಲಿಂಗಕ್ಕೆಂದು ಭಾವಿಸುವೆನು, ಅಂಗಗುಣಂಗಳನರಿಯೆನಾಗಿ. ಲಿಂಗಕ್ಕೆಂದು ಕಾಮಿಸುವೆನು ನಿಃಕಾಮಿಯಾಗಿ, ಲಿಂಗಕ್ಕೆಂದು ತಹೆನಲ್ಲದೆ, ಅಂಗಕ್ಕೆಂದು ಬಯಸಿದರೆ ಲಿಂಗಾರ್ಪಿತಕ್ಕೆ ಸಲ್ಲದಾಗಿ. ಲಿಂಗಕ್ಕೆಂದು ಕೊಟ್ಟು ಕೊಂಬೆನಲ್ಲದೆ, ಅನರ್ಪಿತವನರಿಯೆ ಕೂಡಲ ಚೆನ್ನಸಂಗಮದೇವಾ.