Index   ವಚನ - 287    Search  
 
ಗುರುಪ್ರಸಾದಿಗಳಪೂರ್ವವಪೂರ್ವ, ಲಿಂಗಪ್ರಸಾದಿಗಳಪೂರ್ವವಪೂರ್ವ. ಜಂಗಮ ಪ್ರಸಾದಿಗಳಪೂರ್ವವಪೂರ್ವ, ಪ್ರಸಾದಪ್ರಸಾದಿಗಳಪೂರ್ವವಪೂರ್ವ ಗುರುಪ್ರಸಾದಿ ಗುರುಭಕ್ತಯ್ಯ, ಲಿಂಗಪ್ರಸಾದಿ ಪ್ರಭುದೇವರು, ಜಂಗಮಪ್ರಸಾದಿ ಬಸವಣ್ಣನು, ಪ್ರಸಾದಪ್ರಸಾದಿ ಬಿಬ್ಬಬಾಚಯ್ಯನು. ಇಂತೀ ಪ್ರಸಾದಿಗಳ ಪ್ರಸಾದದಿಂದ ಬದುಕಿದೆನಯ್ಯಾ ಕೂಡಲಚೆನ್ನಸಂಗಮದೇವಾ.