Index   ವಚನ - 295    Search  
 
ಬಯಸಿ ಬಂದುದು ಅಂಗ ಭೋಗ, ಬಯಸದೆ ಬಂದುದು ಲಿಂಗಭೋಗ. ಅಂಗಭೋಗ ಅನರ್ಪಿತ, ಲಿಂಗಭೋಗ ಪ್ರಸಾದ, ಬೇಕೆಂಬುದು ಕಾಯಗುಣ, ಬೇಡೆಂಬುದು ವೈರಾಗ್ಯ. ಬೇಕೆಂಬುದೂ ಇಲ್ಲ, ಬೇಡೆಂಬುದೂ ಇಲ್ಲ ಈ ಉಭಯವನತಿಗಳೆದು ಭೋಗಿಸಬಲ್ಲಡೆ ಕೂಡಲಚೆನ್ನಸಂಗಮದೇವಾ. ನಿಮ್ಮ ಶರಣನೆಂಬೆ.