Index   ವಚನ - 294    Search  
 
ಭಕ್ತರಾದೆವೆಂದು ಭವಿಪಾಕವನೊಲ್ಲೆವೆಂದೆಂಬರು. ಭವಿಪಾಕವೆಂಬುದದೆಂತುಟಯ್ಯಾ? ಅಂಗತ್ರಯಕ್ಕೆ ನೋಡಿದಡದು ಭವಿಪಾಕ, ಲಿಂಗತ್ರಯ ನೋಟಕ್ಕೆ ಅದು ಸಲ್ಲದು. ಗುರು ಕಾರುಣ್ಯವುಂಟು ಭಕ್ತರೆಂದೆಂಬರು, ಅವರಿಗಂಗತ್ರಯದ ನೋಟವುಳ್ಳನಕ್ಕರ ಲಿಂಗತ್ರಯದ ನೋಟವೆಲ್ಲಿಯದೊ? ಪಂಚಭೂತಕಾಯವ ತಂದು ಭಕ್ತರೆಂದರೆ ಪ್ರಸಾದನಾಸ್ತಿಯೆಂದುದು ಕೂಡಲಚೆನ್ನಸಂಗನ ವಚನ.