Index   ವಚನ - 311    Search  
 
ಕಣ್ಣ ಕಪ್ಪರದ ಕಾಳಿಕೆಯ ಕಳೆದು, ತನ್ನ ಲಿಂಗಕ್ಕೆ ಕೊಡಬಲ್ಲನಾಗಿ ಲಿಂಗಪ್ರಸಾದಿ. ನಾಸಿಕ ಕಪ್ಪರದ ಅವಗಂಧವ ಕಳೆದು, ಲಿಂಗಕ್ಕೆ ಕೊಡಬಲ್ಲನಾಗಿ ಲಿಂಗಪ್ರಸಾದಿ. ಜಿಹ್ವೆ ಕಪ್ಪರದಲ್ಲಿ ಅವರುಚಿಯ ಕಳೆದು ಲಿಂಗಕ್ಕೆ ಕೊಡಬಲ್ಲನಾಗಿ ಲಿಂಗ ಪ್ರಸಾದಿ. ಸ್ಪರ್ಶ ಕಪ್ಪರದಲ್ಲಿ ಸೊಪ್ಪಡಗಿದಂತೆ ಯೋಗದ ಪೂರ್ವಾಶ್ರಯವ ಕಳೆದು, ತನ್ನ ಲಿಂಗಕ್ಕೆ ಕೊಡಬಲ್ಲನಾಗಿ ಲಿಂಗಪ್ರಸಾದಿ. "ಜಿಹ್ವಾಗ್ರೇ ಲಿಂಗಂ ಭಕ್ತಸ್ಯ ಲಿಂಗಸ್ಯಾಗ್ರೇ ತಥಾ ರುಚಿಃ| ರುಚ್ಯಗ್ರೇ ತು ಪ್ರಸಾದೋsಸ್ತಿ ಪ್ರಸಾದೋ ಮೋಕ್ಷಸಾಧನಮ್"|| ಇದು ಕಾರಣ, ಕೂಡಲಚೆನ್ನಸಂಗಯ್ಯಾ, ನಿಮ್ಮ ಪ್ರಸಾದಿಗೆ ನಮೋ ಎಂಬೆನು.