Index   ವಚನ - 310    Search  
 
ಸೋಂಕಿನ ಸುಖವ ಇಷ್ಟಲಿಂಗಾರ್ಪಿತವ ಮಾಡಿ, ಅ ಸೋಂಕಿನ ಸುಖವ ಪ್ರಾಣಲಿಂಗಾರ್ಪಿತವ ಮಾಡದಿದ್ದಡೆ ಪ್ರಸಾದಿಯಲ್ಲ, ಶರಣನಲ್ಲ, ಲಿಂಗೈಕ್ಯನಲ್ಲ. "ಸಂಯೋಗೇ ಚ ವಿಯೋಗೇ ಚ ಅಣುಮಾತ್ರಂ ಸುಖಾರ್ಪಣಮ್| ಯಃ ಕುರ್ಯಾದಿಷ್ಟಲಿಂಗೇ ತು ಸೋsವಧಾನೀ ನಿರಂತರಮ್""|| ಇದು ಕಾರಣ, ಕೂಡಲಚೆನ್ನಸಂಗಯ್ಯಾ, ಭೇದವನರಿದು ಅರ್ಪಿತವ ಮಾಡುವ ನಿಮ್ಮ ಪ್ರಸಾದಿಗೆ ನಮೋ ನಮೋ ಎಂಬೆನು.