Index   ವಚನ - 320    Search  
 
ಪ್ರಾಣಲಿಂಗದಲ್ಲಿ ಪ್ರಸಾದಕಾಯವಂತನೆಂತೆಂಬೆ? ಆರಾಧ್ಯಲಿಂಗದಲ್ಲಿ ಸಮಯಾಚಾರವಂತನೆಂತೆಂಬೆ? ಆಚಾರವಿಲ್ಲದ ಕಾಯ ಪ್ರಯೋಜನಕ್ಕೆ ಸಲ್ಲದು, ಸಮಯವಿಲ್ಲದಾಚಾರಕ್ಕೆ ಆಶ್ರಯವಿಲ್ಲ. ಆಚಾರಸ್ಥಲ ಆರಾಧ್ಯಸ್ಥಲ ಪ್ರಸಾದಸ್ಥಲ ಪ್ರತಿಗ್ರಾಹಕನಾಗಿ, "ಸ್ಥಾವರಂ ಜಂಗಮಶ್ಚೈವ ದ್ವಿವಿಧಂ ಲಿಂಗಮುಚ್ಯತೇ" ಇದು ಕಾರಣ, ಕೂಡಲಚೆನ್ನಸಂಗಾ, ನಿಮ್ಮ ಶರಣನ ಲಿಂಗದೇವನೆಂಬೆನು.