Index   ವಚನ - 323    Search  
 
ಲಿಂಗ ಮುಖದಲ್ಲಿ ಬಂದ ಪ್ರಸಾದವ ಪ್ರಸಾದವೆಂಬೆ, ಜಂಗಮ ಮುಖದಲ್ಲಿ ಬಂದ ಪ್ರಸಾದವ ಪ್ರಸಾದವೆಂಬೆ, ಪ್ರಸಾದ ಮುಖದಲ್ಲಿ ಬಂದ ಪ್ರಸಾದವ ಪ್ರಸಾದವೆಂಬೆ, ಅರ್ಪಿತ ಸಂಕಲ್ಪಿತ ಭಾವಾರ್ಪಿತವ ಮಾಡಬಲ್ಲ, ಕೂಡಲಚೆನ್ನಸಂಗಾ ನಿಮ್ಮ ಶರಣ.