Index   ವಚನ - 349    Search  
 
ಅನುಭಾವ ಅನುಭಾವವೆಂದೆಂಬರು ಅನುಭಾವವೆಂಬುದು ನೆಲದ ಮರೆಯ ನಿಧಾನ ಕಾಣಿರೋ, ಅನುಭಾವವೆಂಬುದು ಅಂತರಂಗದ ಶುದ್ಧಿ ಕಾಣಿರೋ. ಅನುಭಾವವೆಂಬುದು ರಚ್ಚೆಯ ಮಾತೆ? ಅನುಭಾವವೆಂಬುದು ಸಂತೆಯ ಸುದ್ದಿಯೆ? ಅನುಭಾವವೆಂಬುದೇನು ಬೀದಿಯ ಪಸರವೆ? ಏನೆಂಬೆ ಹೇಳಾ ಮಹಾಘನವ! ಆನೆಯ ಮಾನದೊಳಗಿಕ್ಕಿದರಡಗೂದೆ ದರ್ಪಣದೊಳಗಡಗೂದಲ್ಲದೆ? ಕಂಡ ಕಂಡಲ್ಲಿ ಗೋಷ್ಠಿ, ನಿಂದ ನಿಂದಲ್ಲಿ ಅನುಭಾವ, ಬಂದ ಬಂದಲ್ಲಿ ಪ್ರಸಂಗವ ಮಾಡುವ ನಿರ್ಬುದ್ಧಿ ನೀಚರ ಮೆಚ್ಚ ಕೂಡಲಚೆನ್ನಸಂಗಮದೇವ.