Index   ವಚನ - 361    Search  
 
ಕಾಯ ಲಿಂಗವ ಮುಟ್ಟಿದರೆ, ಕಾಯ ಲಿಂಗಭಕ್ತನಾಗಿರಬೇಕು. ನಯನ ಲಿಂಗವ ಮುಟ್ಟಿದರೆ, ನಯನ ಲಿಂಗಭಕ್ತನಾಗಿರಬೇಕು. ಶ್ರೋತ್ರ ಲಿಂಗವ ಮುಟ್ಟಿದರೆ, ಶ್ರೋತ್ರ ಲಿಂಗಭಕ್ತನಾಗಿರಬೇಕು. ಭಾವ ಲಿಂಗವ ಮುಟ್ಟಿದರೆ, ಭಾವ ಲಿಂಗಭಕ್ತನಾಗಿರಬೇಕು. ಇದು ಕಾರಣ ಕೂಡಲಚೆನ್ನಸಂಗಯ್ಯಾ ನಿಮ್ಮ ಶರಣ ಸರ್ವಜೀವದಯಾಪಾರಿಯಾಗಿರಬೇಕು.