Index   ವಚನ - 360    Search  
 
ಪರಿಯಾಣವೆ ಭಾಜನವೆಂಬರು, ಪರಿಯಾಣವೆ ಭಾಜನವಲ್ಲ; ಲಿಂಗಕ್ಕೆ ತನ್ನ ಮನವೆ ಭಾಜನ. ಬೀಸರವೋಗದೆ ಮೀಸಲಾಗಿ ಅರ್ಪಿಸಬಲ್ಲರೆ ಕೂಡಿಕೊಂಡಿಪ್ಪ ನಮ್ಮ ಕೂಡಲಚೆನ್ನಸಂಗಮದೇವ.