Index   ವಚನ - 364    Search  
 
ಭಕ್ತನ ಹಸ್ತಮುಟ್ಟಿ ಪಾವನವೆಂಬನ್ನಕ್ಕ ತಾನು ಭವಿಯೇ. ಆತ[ನ] ಲಿಂಗದೇಹಿಯೆಂತೆಂಬೆ? ಲಿಂಗಾಚಾರಿಯೆಂತೆಂಬೆ? ಪವಿತ್ರಕಾಯನೆಂತೆಂಬೆ? ಇದು ಕಾರಣ ಕೂಡಲಚೆನ್ನಸಂಗಯ್ಯಾ ಲಿಂಗಕ್ಷೇತ್ರ, ಜಂಗಮ ಬೀಜವೆಂಬುದನರಿಯರಾಗಿ.