Index   ವಚನ - 374    Search  
 
ಉರಸ್ಥಲದಲ್ಲಿ ಲಿಂಗವ ಧರಿಸಿದ ಬಳಿಕ ಮನದ ಕೊನೆಯಿಂದ ಲಿಂಗವನಗಲದಿರಬೇಕು. ಉರ ಗುರುಸ್ಥಲ, ಉರ ಲಿಂಗಸ್ಥಲ, ಉರ ಜಂಗಮಸ್ಥಲ, ಉರ ಪ್ರಸಾದಿಸ್ಥಲ, ಉರ ಮಹಾಸ್ಥಲ, ಉರ ಮಹಾಮಹಿಮರಿಪ್ಪ ಅನುಭಾವಸ್ಥಲವೆಂದರಿದು ಅನ್ಯಮಿಶ್ರಂಗಳ ಹೊದ್ದಲಾಗದು. ತಟ್ಟು ಮುಟ್ಟು ತಾಗು ನಿರೋಧಗಳಿಗೆ ಗುರಿಯಾಗಲಾಗದು. ಇಂದ್ರಿಯಂಗಳ ಕೂಡ ಮನಸ್ಥಾಪ್ಯಗೊಳದಿದ್ದರೆ, ಇದು ಉರಲಿಂಗ ಸ್ವಾಯತ. ಪ್ರಾಣಲಿಂಗಪ್ರಾಣಿಗಿದು ಚಿಹ್ನೆ, ಕೂಡಲಚೆನ್ನಸಂಗಮದೇವಾ.