Index   ವಚನ - 375    Search  
 
ಕರಸ್ಥಲದಲ್ಲಿ ಲಿಂಗಸ್ಥಾಪನವಾದ ಬಳಿಕ, ಲಿಂಗದಲ್ಲಿ ಅನಿಮಿಷ ದೃಷ್ಟಿಯಾಗಬೇಕು. ತನ್ನ ತಾನೆ ಅನಿಮಿಷವಾಗಬೇಕು. ಲಿಂಗದಲ್ಲಿ ಅನಿಮಿಷವಾಗಬೇಕು. ಜಂಗಮದ ನಿಲುಕಡೆಯನರಿಯಬೇಕು. ಪ್ರಸಾದದಲ್ಲಿ ಪರಿಪೂರ್ಣನಾಗಬೇಕು. ಹಿರಣ್ಯಕ್ಕೆ ಕೈಯಾನದಿರಬೇಕು ತನ್ನ ನಿಲುಕಡೆಯ ತಾನರಿಯಬೇಕು. ಇದು ಕಾರಣ, ಕೂಡಲಚೆನ್ನಸಂಗನಲ್ಲಿ ಕರಸ್ಥಲದ ನಿಜವನರಿವರೆ ಇದು ಕ್ರಮ.