ಅಂಗಸೋಂಕಿನಲ್ಲಿ ಲಿಂಗಸಂಗವಾದ ಬಳಿಕ
ಸರ್ವಾಂಗ ವಿಕಾರವಳಿಯಬೇಕು.
ಅಂಗಸೋಂಕಿನ ಲಿಂಗಕ್ಕೆ ಸೆಜ್ಜೆ,
ಶಿವದಾರವಾ[ವುವೆಂದರೆ];
ಅಂಗವೆ ಲಿಂಗದ ಸೆಜ್ಜೆ, ಆಚಾರವೆ ಶಿವದಾರ.
ತ್ರಿಕರಣ ಶುದ್ಧವಾಗಬೇಕು,
ತ್ರಿವಿಧಗುಣಂಗಳರಿಯಬೇಕು,
ತ್ರಿವಿಧ ಸಂಪನ್ನನಾಗಬೇಕು,
ತ್ರಿಕಾಲ ಶಿವಲಿಂಗಾರ್ಚನೆಯ ಮಾಡಬೇಕು,
ಅಂಗಲಿಂಗ ಸಂಬಂಧಕ್ಕೆ ಇದು ಕ್ರಮ.
ಕೂಡಲಚೆನ್ನಸಂಗಮದೇವಾ.
Art
Manuscript
Music
Courtesy:
Transliteration
Aṅgasōṅkinalli liṅgasaṅgavāda baḷika
sarvāṅga vikāravaḷiyabēku.
Aṅgasōṅkina liṅgakke sejje,
śivadāravā[vuvendare];
aṅgave liṅgada sejje, ācārave śivadāra.
Trikaraṇa śud'dhavāgabēku,
trividhaguṇaṅgaḷariyabēku,
trividha sampannanāgabēku,
trikāla śivaliṅgārcaneya māḍabēku,
aṅgaliṅga sambandhakke idu krama.
Kūḍalacennasaṅgamadēvā.
ಸ್ಥಲ -
ಪ್ರಾಣಲಿಂಗಿಯ ಜ್ಞಾನಿಸ್ಥಲ