Index   ವಚನ - 376    Search  
 
ಅಂಗಸೋಂಕಿನಲ್ಲಿ ಲಿಂಗಸಂಗವಾದ ಬಳಿಕ ಸರ್ವಾಂಗ ವಿಕಾರವಳಿಯಬೇಕು. ಅಂಗಸೋಂಕಿನ ಲಿಂಗಕ್ಕೆ ಸೆಜ್ಜೆ, ಶಿವದಾರವಾ[ವುವೆಂದರೆ]; ಅಂಗವೆ ಲಿಂಗದ ಸೆಜ್ಜೆ, ಆಚಾರವೆ ಶಿವದಾರ. ತ್ರಿಕರಣ ಶುದ್ಧವಾಗಬೇಕು, ತ್ರಿವಿಧಗುಣಂಗಳರಿಯಬೇಕು, ತ್ರಿವಿಧ ಸಂಪನ್ನನಾಗಬೇಕು, ತ್ರಿಕಾಲ ಶಿವಲಿಂಗಾರ್ಚನೆಯ ಮಾಡಬೇಕು, ಅಂಗಲಿಂಗ ಸಂಬಂಧಕ್ಕೆ ಇದು ಕ್ರಮ. ಕೂಡಲಚೆನ್ನಸಂಗಮದೇವಾ.