Index   ವಚನ - 377    Search  
 
ಕಕ್ಷೆಯಲ್ಲಿ ಲಿಂಗವ ಧರಿಸಿಕೊಂಡ ಬಳಿಕ ಅನ್ಯಕಾಂಕ್ಷೆಯಿಲ್ಲದಿರಬೇಕು. ಮಾಯದ ಉಸಿರು ಎಡೆಯಾಡದಿರಬೇಕು, ಸಂಸಾರ ಸಂಗವ ಹೊದ್ದದೆ ಮನವು ಮಹಾಸ್ಥಲವನಿಂಬುಗೊಂಡಿರಬೇಕು, ಕೂಡಲಚೆನ್ನಸಂಗನಲ್ಲಿ ಏಕಾರ್ಥವಾಗಿರಬೇಕು.