ಗುರುಕಾರುಣ್ಯದ ಮಹಾಸಂಪಾದನೆಯಲ್ಲಿ
ಅತ್ಯಂತ ವಿಶೇಷ ಸ್ಥಲವೆ ಗಳವು.
ಮಹಾಲಿಂಗ ಸಂಪಾದನೆಯಲ್ಲಿ,
ತ್ರಿವಿಧ ಸಂಪಾದನೆಯಲ್ಲಿ,
ಶರೀರಾರ್ಥ ಮಹಾರ್ಥದಲ್ಲಿ,
ನಾದಬಿಂದು ಸಂಪಾದನೆಯಲ್ಲಿ,
ಮಾರ್ಗಕ್ರಿಯಾ ಸಂಪಾದನೆಯಲ್ಲಿ,
ಭಕ್ತಿ ಸಂಪಾದನೆಯಲ್ಲಿ,
ಭಾವ ನಿಷ್ಠೆಯಲ್ಲಿ, ಅರ್ಪಿತ ನಿಷ್ಠೆಯಲ್ಲಿ
ಆ ಗಳವೆ ಘನಸ್ಥಳ.
ಅತ್ಯಂತ ವಿಶೇಷಸ್ಥಳವಾಗಿ ಗಳದಲ್ಲಿ ಧರಿಸಿದರೆ
ಕೂಡಲಚೆನ್ನಸಂಗಯ್ಯನಲ್ಲಿ ಇದೇ ಕ್ರಮ.
Art
Manuscript
Music
Courtesy:
Transliteration
Gurukāruṇyada mahāsampādaneyalli
atyanta viśēṣa sthalave gaḷavu.
Mahāliṅga sampādaneyalli,
trividha sampādaneyalli,
śarīrārtha mahārthadalli,
nādabindu sampādaneyalli,
mārgakriyā sampādaneyalli,
bhakti sampādaneyalli,
bhāva niṣṭheyalli, arpita niṣṭheyalli
ā gaḷave ghanasthaḷa.
Atyanta viśēṣasthaḷavāgi gaḷadalli dharisidare
kūḍalacennasaṅgayyanalli idē krama.
ಸ್ಥಲ -
ಪ್ರಾಣಲಿಂಗಿಯ ಜ್ಞಾನಿಸ್ಥಲ