Index   ವಚನ - 379    Search  
 
ಅಮಳೋಕ್ಯದಲ್ಲಿ ಲಿಂಗವ ಧರಿಸುವರೆ ಅನ್ನ ಪಾನಾದಿಗಳ ಹಂಗಳಿಯಬೇಕು, ಅಹಂಕಾರ ಮದಂಗಳಳಿಯಬೇಕು, ಜ್ಞಾನ ವಿಸ್ತಾರ ಪರಿಪೂರ್ಣನಾಗಿರಬೇಕು, ಅನುಭಾವ ಘನಮನವೇದ್ಯನಾಗಬೇಕು, ಕಾಮದ ಕಣ್ಣರಿಯದಿರಬೇಕು, ಶಬ್ದ ನಿಶ್ಶಬ್ಧವಾಗಬೇಕು, ಮಹದಾಶ್ರಯದಲ್ಲಿ ಮನವು ಲೀಯವಾಗಬೇಕು. ಕೂಡಲಚೆನ್ನಸಂಗನಲ್ಲಿ ಏಕಾರ್ಥವಾಗಿರಬೇಕು.