Index   ವಚನ - 378    Search  
 
ಗುರುಕಾರುಣ್ಯದ ಮಹಾಸಂಪಾದನೆಯಲ್ಲಿ ಅತ್ಯಂತ ವಿಶೇಷ ಸ್ಥಲವೆ ಗಳವು. ಮಹಾಲಿಂಗ ಸಂಪಾದನೆಯಲ್ಲಿ, ತ್ರಿವಿಧ ಸಂಪಾದನೆಯಲ್ಲಿ, ಶರೀರಾರ್ಥ ಮಹಾರ್ಥದಲ್ಲಿ, ನಾದಬಿಂದು ಸಂಪಾದನೆಯಲ್ಲಿ, ಮಾರ್ಗಕ್ರಿಯಾ ಸಂಪಾದನೆಯಲ್ಲಿ, ಭಕ್ತಿ ಸಂಪಾದನೆಯಲ್ಲಿ, ಭಾವ ನಿಷ್ಠೆಯಲ್ಲಿ, ಅರ್ಪಿತ ನಿಷ್ಠೆಯಲ್ಲಿ ಆ ಗಳವೆ ಘನಸ್ಥಳ. ಅತ್ಯಂತ ವಿಶೇಷಸ್ಥಳವಾಗಿ ಗಳದಲ್ಲಿ ಧರಿಸಿದರೆ ಕೂಡಲಚೆನ್ನಸಂಗಯ್ಯನಲ್ಲಿ ಇದೇ ಕ್ರಮ.