Index   ವಚನ - 382    Search  
 
ಪೂರ್ವಬೀಜನಲ್ಲ, ಪೂರ್ವಪ್ರಾಣಿಯಲ್ಲ, ಪೂರ್ವಾಹಾರಿಯಲ್ಲ. ಪೂರ್ವಾದಿಗಳೆಲ್ಲವನುತ್ತರಿಸಿ ಕಳೆದು ಲಿಂಗಗರ್ಭಿತನಾದ, ಕೂಡಲಚೆನ್ನಸಂಗಾ ನಿಮ್ಮ ಶರಣ.