Index   ವಚನ - 384    Search  
 
(ಧ)ರ್ಮವೆ ಸಯವಾಗಿ, ಆಚಾರದ ನಿಲವನರಿದು, ಹೃದಯದ ಕತ್ತಲೆಯ ಉದಯದಲೆ ಕಳೆದು, ಮುಟ್ಟುವುದ ಮುಟ್ಟದೆ ಕಳೆದು, ಮುಟ್ಟದುದ ಮುನ್ನವೆ ಕಳೆದು, ಅಯ್ಯಾ ಅಯ್ಯಾಯೆಂಬಲ್ಲಿಯೆ ಕಲಿಯಾದ. ಕೇಸರಿಸಮ ಜೋಗಯ್ದ ಮದಸೇನೆಗಳ ಮುರಿಯಿತ್ತು, ಎನ್ನೊಡೆಯ ಕೂಡಲಚೆನ್ನಸಂಗಯ್ಯ ಹಿಡಿವಡೆದ.