Index   ವಚನ - 388    Search  
 
ಕಳೆಯೇರಿದ ಲಿಂಗದ ತೆರನನರಿದು, [ಕಳೆ] ಕಳೆಯದ ವಳಯದ ಸೀಮೆಯಿಂದತ್ತತ್ತಲು ವೇಧಿಸಿದ ಮುಗ್ದೆಯ ನೋಡಾ. ಪಂಚಭೂತದ ಗಡಣೆಯ ಭಾವವ ನೇಮದಲ್ಲಿ ಭಾವಿಸಿದ ಮುಗ್ಧೆಯ ನೋಡಾ. ಇರುಳು ಹಗಲೆಂಬ ಬೆಳಗು ಕತ್ತಲೆಯನರಿಯದ ಮುಗ್ಧೆಯ ನೋಡಾ. ಆಕಾರ ನಿರಾಕಾರ ಸಿಂಗಾರದ ಪುಣ್ಯ ಪಾಪದ, ಅರಿವಿನ ಮರಹಿನ, ಅಷ್ಟದಳಕಮಲದ ಮಧುಪಾನವಾಗದೆ, ಕೂಡಲಚೆನ್ನಸಂಗಯ್ಯನೆಂಬ ಮಹಾಲಿಂಗವನು ಮನದಲ್ಲಿ ಅಳವಡಿಸಿದ ಮುಗ್ಧೆಯ ನೋಡಾ.