Index   ವಚನ - 412    Search  
 
ಅರಸನ ಹೆಸರಿಟ್ಟ ಅನಾಮಿಕನಂತೆ ನಾಮಕ್ಕರುಹರಲ್ಲದೆ ಪಟ್ಟಕ್ಕರುಹರಪ್ಪರೆ? ಲಿಂಗ ಜಂಗಮ ಪ್ರಸಾದದ ಅನುಭಾವದ ಹೆಸರ ಹೇಳಿಕೊಂಡು ಬದುಕುವರಲ್ಲದೆ, ವೇಷವ ಧರಿಸಿಪ್ಪ ಆಶ್ರಿತರೆಲ್ಲರೂ, ಸಜ್ಜನ ಸಂಬಂಧ ಗುಣಾದಿಗುಣಂಗಳಿಗೆ ಯೋಗ್ಯರೆ? ಕೂಡಲಚೆನ್ನಸಂಗಯ್ಯಾ ಸಹಜ ಸಮ್ಯಕರಲ್ಲದವರಂತಿರಲಿ.