Index   ವಚನ - 411    Search  
 
ಶೀಲವಂತರು ಲಕ್ಕ ಲಕ್ಕ, ನೇಮಸ್ಥರು ಲಕ್ಕ ಲಕ್ಕ, ವ್ರತಸ್ಥರು ಲಕ್ಕ ಲಕ್ಕ, ಅರ್ಥ ಪ್ರಾಣ ಅಭಿಮಾನವನೊಪ್ಪಿಸಿದ ವೈರಾಗಿಗಳು ಲಕ್ಕ ಲಕ್ಕ. ಕೂಡಲಚೆನ್ನಸಂಗಯ್ಯನಲ್ಲಿ ಇವರೆಲ್ಲಾ ಫಲಸದರ್ಥರಲ್ಲದೆ ಲಿಂಗ[ಸ]ದರ್ಥರಾರೂ ಇಲ್ಲ.