Index   ವಚನ - 418    Search  
 
ಅಷ್ಟವಿಧಾರ್ಚನೆ ಷೋಡಶೋಪಚಾರವ ಮಾಡಲಾಗದು. ಉದಯಾಸ್ತಮಾನವ ನೋಡಿ ಮಾಡುವ ತುಡುಗುಣಿ ನಾಯಿಗಳು ನೀವು ಕೇಳಿ ಭೋ. ಉದಯವೆಂದೇನೂ ಶರಣಂಗೆ? ಅಸ್ತಮಾನವೆಂದೇನೂ ಶರಣಂಗೆ? ಮಹಾಮೇರುವಿನ ಮರೆಯಲ್ಲಿದ್ದು ತನ್ನ ನೆಳಲನರಸುವ ಭಾವಭ್ರಮಿತರ ಮೆಚ್ಚ ಕೂಡಲಚೆನ್ನಸಂಗಮದೇವ.