Index   ವಚನ - 420    Search  
 
ಶ್ರೀಗುರು ಕರಸ್ಥಲಕ್ಕೆ ಇಷ್ಟಲಿಂಗವ ಬಿಜಯಂಗೈಸಿ ಕೊಟ್ಟ ಬಳಿಕ, ಮತ್ತೊಂದು ಸೆಜ್ಜೆ ಶಿವದಾರಬೇಕೆಂಬ ದ್ರೋಹ ಸಾಲದೆ? ಅಂಗದ ಲಿಂಗವ ಹಿಂಗಿ, ಮಜ್ಜನಕ್ಕೆರೆವ ಭಂಗಿತರ ತೋರದಿರಯ್ಯಾ, ಕೂಡಲಚೆನ್ನಸಂಗಯ್ಯಾ.