Index   ವಚನ - 421    Search  
 
ಮನೆಯೊಳಗಣ ಜ್ಯೋತಿ ಮನೆಯ ಮುಟ್ಟದಂತೆ, ಬಸುರೊಳಗಣ ಶಿಶು ಬಸುರ ಮುಟ್ಟದಂತೆ, ಕಕ್ಷೆ, ಕರಸ್ಥಳ, ಅಂಗಸೋಂಕು, ಮುಖಸೆಜ್ಜೆ ಕಂಠ, ಉತ್ತಮಾಂಗ, ಇವೆಲ್ಲ ಆಯತಂಗಳಲ್ಲದೆ ಪ್ರಾಣಲಿಂಗಸ್ಥಳ ಬೇರೆ. ಇದು ಕಾರಣ, ಕೂಡಲಚೆನ್ನಸಂಗಾ ನಿಮ್ಮ ಶರಣನ ಪರಿ ಬೇರೆ.