Index   ವಚನ - 425    Search  
 
ಸದ್ಗುರು ಕಾರುಣ್ಯವುಳ್ಳ ಭಕ್ತನ ಲಿಂಗ ಓಸರಿಸಿದರೆ ವ್ರತಗೇಡಿಯೆಂದು ಕಳೆಯಬಾರದು, ಕೊಳಬಾರದು, [ಮುಂದೆ] ಕಾರುಣ್ಯವುಂಟಾಗಿ: "ಸುವ್ರತಂ ಸುಲಭಂ ಸಿದ್ಧಂ ಶತ್ರುಜಿತ್ ಶತ್ರುಪಾವನಃ" ಎಂದುದಾಗಿ, 'ಅಲಿಂಗೀ ಲಿಂಗರೂಪೇಣ ಯೋ ಲಿಂಗಮುಪಜೀವತಿ ಸ ಪಚ್ಯತೇ ಮಹಾಘೋರೇ ನರಕೇ ಕಾಲಮಕ್ಷಯಮ್' ಎಂದುದಾಗಿ, ಶಸ್ತ್ರ, ಸಮಾಧಿ, ಜಲಾಂತ, ವನಾಂತ, ದಿಗ್ಭಲಿ, ದಹನ ಈ ಆರರಲ್ಲಿ ಸತ್ತಡೆ ಕೂಡಲಚೆನ್ನಸಂಗಯ್ಯನಲ್ಲಿ ಆತ ವ್ರತಗೇಡಿ.