Index   ವಚನ - 424    Search  
 
ಪ್ರತಿಯಿಲ್ಲದ ಲಿಂಗ ಭಿನ್ನವಾಯಿತ್ತೆಂದು ತನ್ನ ತನುವಿನ ಮೇಲೆ ಶಸ್ತ್ರವನಿಕ್ಕಿಕೊಂಬ, ಆತ್ಮದ್ರೋಹಿಯ ಮುಖವ ನೋಡಲಾಗದು. ಶಬ್ದ ಭಿನ್ನವಿಲ್ಲಾಗಿ ಪೂಜೆ ಭಿನ್ನವಿಲ್ಲ. ಮಹಾಬಯಲೊಳಗಣ ಪ್ರಾಣದ ಸಂಚವನರಿಯರಾಗಿ ಕೂಡಲಚೆನ್ನಸಂಗಯ್ಯಾ ಅವರು ರೌರವನರಕಿಗಳು.