Index   ವಚನ - 429    Search  
 
ಅಂಗದ ಮೇಲಣ ಲಿಂಗ ಹಿಂಗಿತ್ತೆಂದು ಆತ್ಮಘಾತವ ಮಾಡಬೇಕೆಂಬ ಅಜ್ಞಾನಿಗಳು ಅಂಗವಾವುದು ಲಿಂಗವಾವುದೆಂದವರೆತ್ತ ಬಲ್ಲರು? ಅಂಗವೆ ಆತ್ಮ, ಲಿಂಗವೆ ಸಂವಿತ್ತು. ಎರಡರ ಸಂಬಂಧ ಸಂಚ ತಿಳಿಯದೆ ಲಿಂಗ ಹಿಂಗಿತ್ತೆಂಬವರಿಗೆ ಪ್ರಾಣಲಿಂಗನಾಸ್ತಿ, ಪ್ರಸಾದವೆಲ್ಲಿಯದೋ ಕೂಡಲಚೆನ್ನಸಂಗಮದೇವಾ.