ಭಕ್ತಿಯಂತುಟಲ್ಲ, ಮುಕ್ತಿಯಂತುಟಲ್ಲ,
ಯುಕ್ತಿಯ ಪರಿ ಬೇರೆ.
ವೀರವೈರಾಗ್ಯಭಾಷೆಯಂತುಟಲ್ಲ,
ಸಹಜದ ಪರಿ ಬೇರೆ.
ಅಂಗಲಿಂಗದ ಸಂಬಂಧವು ಸಾರಾಯಂಗಲ್ಲದೆ,
ಸುಪ್ರಸಾದ ಗ್ರಾಹಕತ್ವ ಪ್ರಾಣಲಿಂಗಿಗಲ್ಲದೆ.
"ಪರಿತಃ ಪ್ರಾಣಲಿಂಗೀನಾಂ ಲಿಂಗಪ್ರಾಣಂ ತದುತ್ತಮಮ್|
ಸ್ವಯಮಾತ್ಮವಧಂ ಕುರ್ವನ್ ನರಕೇ ಕಾಲಮಕ್ಷಯಮ್"||
ಇದು ಕಾರಣ ಕೂಡಲಚೆನ್ನಸಂಗಯ್ಯಾ
ನಿಮ್ಮ ಸಂಬಂಧಸಾರಾಯಸುಪ್ರಸಾದ,
ಪ್ರಾಣನಿಯತ ಲಿಂಗಪ್ರಾಣಿಗಲ್ಲದೆಲ್ಲಿಯದೋ.
Art
Manuscript
Music
Courtesy:
Transliteration
Bhaktiyantuṭalla, muktiyantuṭalla,
yuktiya pari bēre.
Vīravairāgyabhāṣeyantuṭalla,
sahajada pari bēre.
Aṅgaliṅgada sambandhavu sārāyaṅgallade,
suprasāda grāhakatva prāṇaliṅgigallade.
Paritaḥ prāṇaliṅgīnāṁ liṅgaprāṇaṁ taduttamam|
svayamātmavadhaṁ kurvan narakē kālamakṣayam||
idu kāraṇa kūḍalacennasaṅgayyā
nim'ma sambandhasārāyasuprasāda,
prāṇaniyata liṅgaprāṇigalladelliyadō.
ಸ್ಥಲ -
ಪ್ರಾಣಲಿಂಗಿಯ ಪ್ರಸಾದಿಸ್ಥಲ