Index   ವಚನ - 430    Search  
 
ಭಕ್ತಿಯಂತುಟಲ್ಲ, ಮುಕ್ತಿಯಂತುಟಲ್ಲ, ಯುಕ್ತಿಯ ಪರಿ ಬೇರೆ. ವೀರವೈರಾಗ್ಯಭಾಷೆಯಂತುಟಲ್ಲ, ಸಹಜದ ಪರಿ ಬೇರೆ. ಅಂಗಲಿಂಗದ ಸಂಬಂಧವು ಸಾರಾಯಂಗಲ್ಲದೆ, ಸುಪ್ರಸಾದ ಗ್ರಾಹಕತ್ವ ಪ್ರಾಣಲಿಂಗಿಗಲ್ಲದೆ. "ಪರಿತಃ ಪ್ರಾಣಲಿಂಗೀನಾಂ ಲಿಂಗಪ್ರಾಣಂ ತದುತ್ತಮಮ್| ಸ್ವಯಮಾತ್ಮವಧಂ ಕುರ್ವನ್ ನರಕೇ ಕಾಲಮಕ್ಷಯಮ್"|| ಇದು ಕಾರಣ ಕೂಡಲಚೆನ್ನಸಂಗಯ್ಯಾ ನಿಮ್ಮ ಸಂಬಂಧಸಾರಾಯಸುಪ್ರಸಾದ, ಪ್ರಾಣನಿಯತ ಲಿಂಗಪ್ರಾಣಿಗಲ್ಲದೆಲ್ಲಿಯದೋ.