Index   ವಚನ - 431    Search  
 
ಅರ್ಪಿತ ಸಯಿದಾನಪ್ರಸಾದ ಕಾಯಕ್ಕೆ, ಅನರ್ಪಿತ ಸಯಿದಾನಪ್ರಸಾದ ಪ್ರಾಣಕ್ಕೆಂಬ ಭೇದವನಾರೂ [ಅರಿವರಿಲ್ಲ]. ತನುವ ಭೋಗಿಸುವ ಉಪಜೀವಿ ಪ್ರಸಾದಿಗಳಲ್ಲದೆ, ಪ್ರಾಣವ ಭೋಗಿಸುವ ಪರಿಣಾಮಪ್ರಸಾದಿಗಳನೊಬ್ಬರನೂ ಕಾಣೆ. ಇದು ಕಾರಣ ಕೂಡಲಚೆನ್ನಸಂಗಾ ನಿಮ್ಮ ಪ್ರಾಣಲಿಂಗಪ್ರಸಾದ ಹುಡಿಮಾಡಿ ಕಾಡಿತ್ತು.