Index   ವಚನ - 432    Search  
 
ವಾಯುಪ್ರಾಣಿಯ ಕಳೆದು, ಗುರುಸ್ವಾಮಿ ಲಿಂಗಪ್ರಾಣಿಯ ಮಾಡಿದ ಠಾವನುದಾಸೀನವ ಮಾಡಿ ನಡೆವರು. ಇದನಾನೇನೆಂದರಿಯೆನಯ್ಯಾ. ಪಂಚಭೂತಕಾಯವ ಕಳೆದು ಪ್ರಸಾದಕಾಯವ ಮಾಡಿದನಾಗಿ ಮುಂದೆ ಅರ್ಪಿತವೆಂಬುದನಾನರಿಯೆನಯ್ಯಾ. "ಶಿವಾತ್ಮಕಂ ಸುಖಂ ಜೀವೋ ಜೀವಾತ್ಮಕಂ ಸುಖಂ ಶಿವಃ | ಶಿವಾತ್ಮನಾಪಿ ಸಂತುಷ್ಟಂ ಪ್ರಾಣಲಿಂಗಪ್ರಸಾದಿನಾಂ"|| ಇಂತೆಂಬ ವಚನವ ಕೇಳಿ ನಂಬೂದು. ನಂಬದಿದ್ದರೆ ಪ್ರಾಣಲಿಂಗವೆಂಬ ಶಬ್ದಕ್ಕೆ ಭಂಗ ಹೊದ್ದಿತ್ತು. ಕೂಡಲಚೆನ್ನಸಂಗಮದೇವಾ.