Index   ವಚನ - 436    Search  
 
ರೂಪನರ್ಪಿಸಬಹುದಲ್ಲದೆ ರುಚಿಯನರ್ಪಿಸುವ ಪರಿಯಿನ್ನೆಂತೊ? ಉರವಣಿಸಿ ಬಂದ ತನುಗುಣಾದಿಗಳ ಲಿಂಗದೊಳಗೆ ನಿಕ್ಷೇಪವ ಮಾಡದಿದ್ದರೆ ಪ್ರಾಣಲಿಂಗನಾಸ್ತಿ, ಪ್ರಸಾದವೆಲ್ಲಿಯದು ಕೂಡಲಚೆನ್ನಸಂಗಯ್ಯಾ?