Index   ವಚನ - 437    Search  
 
ಅಂಗದ ಕೈಯಲು ಲಿಂಗವಿಪ್ಪುದು, ಲಿಂಗದ ಕೈಯಲು ಅರ್ಪಿತವೆಂಬರು. ಲಿಂಗಾರ್ಪಿತವಲ್ಲದೆ ಕೊಳ್ಳೆವೆಂಬರು, ಪ್ರಾಣಲಿಂಗಿಗಳಲ್ಲದವರು. ಪದಾರ್ಥ ಲಿಂಗಕ್ಕೆ ಬಂದುದು-ಬಾರದೆಂಬ ಸಂದೇಹವುಳ್ಳನಕ ಕೊಂಡುದು ಕಿಲ್ಬಿಷ ಕೂಡಲಚೆನ್ನಸಂಗಮದೇವಾ.