Index   ವಚನ - 438    Search  
 
ಕೂಡಿ ಮಾಡಿದ ಸಯಿದಾನವ ತಂದು ಪದಾರ್ಥವೆಂದು, ಇಷ್ಟಲಿಂಗದಲ್ಲಿ ಪೂರ್ವಾಶ್ರಯ ಹೋಯಿತ್ತೆಂದು, ಪ್ರಾಣಲಿಂಗಕ್ಕೆ ಓಗರವೆಂದು ನೀಡುತ್ತಿದ್ದರಯ್ಯಾ. ಅಂಗದ ಕೈಯಲು ಅರ್ಪಿತವದೆ, ಲಿಂಗದ ಕೈಯಲು ರುಚಿಯದೆ. ಅಂಗದ ಕೈಯಾವುದು ಲಿಂಗದ ಕೈಯಾವುದೆಂದರಿಯರು. ಬೇರೆ ಮತ್ತೊಂದೆಂಬರು. ಒಂದೆಂದರ್ಪಿಸಿ ಮತ್ತೊಂದೆಂದು ಭಾವಿಸಿದರೆ ಹೊಂದಿದ ನೊಣವಿನಂತಾದರು, ಕೂಡಲಚೆನ್ನಸಂಗನಲ್ಲಿ ಅವರ ಸಹಜರೆಂತೆಂಬೆ.