Index   ವಚನ - 451    Search  
 
ಸ್ಥಲಗೆಟ್ಟ ನಿಭ್ರಾಂತಂಗೆ, ಸಾಕಾರಗುಣವಡಗಿದ ಸನ್ಮಾರ್ಗಂಗೆ, ನಯನ [ತಾ]ಗಿದ ಸುಖವ ಮನಮುಟ್ಟಲೀಯದ ಪ್ರಸಾದಿ[ಗೆ], ಕರಣೇಂದ್ರಿಯಂಗಳಳಿದವು, ಕೂಡಲಚೆನ್ನಸಂಗಾ ನಿಮ್ಮ ಪ್ರಸಾದಿಗೆ.