Index   ವಚನ - 450    Search  
 
[ಅನರ್ಪಿತ] ಭುಂಜಕಂಗೆ ಎಂಜಲುಂಟಲ್ಲದೆ [ಅರ್ಪಿತ] ಭುಂಜಕಂಗೆ ಎಂಜಲೆಲ್ಲಿಯದು? ಶಿವ ಭೋಜನವ ಮಾಡಲು ಭಾಜನವಾದಾತಂಗೆ, ಪ್ರಸಾದಭೋಗಿಗೆ ಎಂಜಲೆಲ್ಲಿಯದು? "ಕರ್ಮಭೋಗೇ ಶಿವಸ್ಯೈವ ಉಪಭೋಗವಿಶೇಷತಃ| ಅಶರೀರಮಿದಂ ಗ್ರಾಹ್ಯಂ ಲಿಂಗಸಾರಾಯ ಸಂಯುತಮ್"|| ಇದು ಕಾರಣ, ಕೂಡಲಚೆನ್ನಸಂಗಾ ನಿಮ್ಮ ಶರಣಂಗೆಂಜಲು ಸೂತಕ ಹೊದ್ದಲೀಯದು.