Index   ವಚನ - 459    Search  
 
ಪ್ರಾಣ ಲಿಂಗಕ್ಕೆ ಆಗಿ, ಲಿಂಗ ಪ್ರಾಣಕ್ಕೆ ಆಗಿ, ಆಚಾರ ಅನುಭಾವ ದ್ವಿವಿಧ ಸನುಮತವಾಗಿ, ತನು ಪ್ರಸಾದಕ್ಕೆಯಾಗಿ ಪ್ರಸಾದ ತನುವಿಂಗಾಗಿ, ಶರೀರಪ್ರೇಮದಿಂ ಸರ್ವಾಂಗ[ಲಿಂಗ] ನೋಡಾ. ಬಂದುದೆ ಓಗರ ನಿಂದುದೆ ಪ್ರಸಾದ. ಅಲ್ಲಿ ನಿತ್ಯನಿರಂತರ ಸಾವಧಾನಿ ಕೂಡಲಚೆನ್ನಸಂಗಾ ನಿಮ್ಮ ಶರಣ.