Index   ವಚನ - 470    Search  
 
ಅರ್ಪಿತ ರೌರವ ನರಕವೆಂದುದು ಗುರುವಚನ ಅನರ್ಪಿತ ರೌರವನರಕವೆಂದುದು ಗುರುವಚನ. ಭುಂಜನ ಮಾಡಿದ ರುಚಿಯು ಲಿಂಗಕ್ಕೆಂಬ ಕರ್ಮಿಯ ಮಾತ ಕೇಳಲಾಗದು, "ಸರ್ವಾವಸ್ಥಾಂ ಗತಾಃ ಪ್ರಾಣಾಃ ಭಾಜನಂ ಭೋಜನಂ ತಥಾ| ಹಸ್ತಲಿಂಗೇs ಪ್ರತಿಗ್ರಾಹ್ಯ ನರಕೇ ಕಾಲಮಕ್ಷಯಮ್|| ಸಂಕಲ್ಪಂ ಚ ವಿಕಲ್ಪಂ ಚ ಭಾವಾಭಾವವಿವರ್ಜಿತಃ | ನಾಸ್ತ್ಯೇಂದ್ರಿಯಾಂತಃಕರಣಂ ತೇನೈವ ಸಹಭೋಜನಂ"|| ಎಂದುದಾಗಿ ತಾಗಿದ ಸುಖವು ಲಿಂಗಕ್ಕೆಂಬ ಗುರುದ್ರೋಹಿಯ ಮಾತ ಕೇಳಲಾಗದು. ಲಿಂಗಭಾಜನದಲ್ಲಿ ಸಹಭೋಜನವ ಮಾಡಿದರೆ ಇಹಪರವಿಲ್ಲೆಂದ ಕೂಡಲಚೆನ್ನಸಂಗಮದೇವ.